ಬುಧವಾರ, ಜನವರಿ 9, 2019

ಅಕ್ರಂಪಾಷಾಗೆ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ



ದಿನಾಂಕ 30-12-2018 ರಂದು ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ಚಿಂತಾಮಣಿ ನಗರದ ಶ್ರೀಸಾಯಿ ಭಾಗ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ " ರಾಜ್ಯಮಟ್ಟದ ಕವಿಗೋಷ್ಟಿ" ಕಾರ್ಯಕ್ರಮದಲ್ಲಿ "ಕನ್ನಡ ಕವಿವಾಣಿ" ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಅಕ್ರಂಪಾಷಾ ಕೆ. ಎನ್. ರವರಿಗೆ "ಸಾಹಿತ್ಯ ಚಿಂತಾಮಣಿ" ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಬಳಗ ( ಚಿಂತಾಮಣಿ ಘಟಕ) ರವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅಕ್ರಂರವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿದರು. ಇದೇ ಕವಿಗೋಷ್ಟಿಯಲ್ಲಿ ಅಕ್ರಂರವರು ತಮ್ಮ ಕವನಗಳನ್ನು ವಾಚಿಸಿ ಎಲ್ಲರ ಗೌರವಕ್ಕೆ ಪಾತ್ರರಾದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ