ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಶುಕ್ರವಾರ, ಏಪ್ರಿಲ್ 24, 2020
ನಿಮ್ಮ ಕನ್ನಡ ಕವಿವಾಣಿಗೆ ಈಗ 7 ವಸಂತಗಳು
ಸಮಸ್ತ ನಾಡಿನ ಕವಿ ಕಲಾವಿದರಿಗೆ ನಮಸ್ಕಾರಗಳು .ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಕಾವ್ಯಾಸಕ್ತರ ಮನಗೆದ್ದ ನಿಮ್ಮೆಲ್ಲರ ಕನ್ನಡ ಕವಿವಾಣಿ ಮಾಸಪತ್ರಿಕೆಯು ಇಂದಿಗೆ ತನ್ನ 6 ವಸಂತಗಳನ್ನು ಪೂರೈಸಿ 7ನೇ ವಸಂತಕ್ಕೆ ಕಾಲಿಟ್ಟಿದೆ ಎಂದು ತಿಳಿಸಲು ಹರ್ಷಿಸುತ್ತೇವೆ .ಎರಡು ಪುಟದಿಂದ ಆರಂಭವಾದ ಪತ್ರಿಕೆಯು ಇಂದು 28 ಪುಟಗಳ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿರುವ ಹೆಮ್ಮೆಯ ವಿಷಯವಾಗಿದೆ. ರಾಜ್ಯದ ಎಲ್ಲಾ ಉದಯೋನ್ಮುಖ ಹಿರಿಯ ಸಾಹಿತಿ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಅವರುಗಳನ್ನು ಸಮಾಜಕ್ಕೆ ಪರಿಚಯಿಸಿ ಪ್ರೋತ್ಸಾಹವನ್ನು ನೀಡುತ್ತಾ ತನ್ನ ಕಾರ್ಯಕ್ಕೆ ಮೆಚ್ಚುಗೆಯನ್ನು ಪಡೆಯುತ್ತಾ ಸಾಗುತ್ತಿದೆ ಎಂದು ಹೇಳಲು ಇಚ್ಚಿಸುತ್ತೇನೆ. ನಮ್ಮ ಈ ಪತ್ರಿಕೆಯ ಈ ಸಾಧನೆಯ ಹಿಂದೆ ಹಲವಾರು ಕವಿ-ಕಲಾವಿದರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೂ ಇದೆ ಎಂದು ತಿಳಿಸುತ್ತೇನೆ .ಪತ್ರಿಕೆಯ ಯಶಸ್ಸಿಗೆ ಸಹಕರಿಸಿದ ಎಲ್ಲ ಸಹೃದಯಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ತಮ್ಮ ಸಹಾಯವನ್ನು ಸಲಹೆ-ಸೂಚನೆಗಳನ್ನು ಬಯಸುತ್ತೇನೆ ಧನ್ಯವಾದಗಳು...
- ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ
ಸೋಮವಾರ, ಏಪ್ರಿಲ್ 20, 2020
ಪ್ರಶಸ್ತಿ ಪತ್ರಗಳು - ರಾಜ್ಯ ಮಟ್ಟದ ಮಕ್ಕಳ ಗೀತೆ ಸ್ಪರ್ಧೆ
ಚಿಂತಾಮಣಿಯ ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ ಏಪ್ರಿಲ್ 15ರಂದು ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮಕ್ಕಳ ಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ ಮತ್ತು ಮೆಚ್ಚುಗೆ ಪಡೆದ ಕವನಗಳನ್ನು ರಚಿಸಿದ ಕವಿಗಳಿಗೆ ಪತ್ರಿಕೆಯ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
💐💐💐💐💐💐
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ
💐💐💐💐💐💐
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ, ಚಿಂತಾಮಣಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





















































