ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಮಂಗಳವಾರ, ಅಕ್ಟೋಬರ್ 31, 2017
ಡಿ.ಕೆ.ರವಿ ಸ್ಮರಣಾರ್ಥ ರಾಜ್ಯಮಟ್ಟದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ
ಚಿಂತಾಮಣಿ: ದಕ್ಷ ಐ.ಎ.ಎಸ್ ಅಧಿಕಾರಿ
ದಿವಂಗತ ಡಿ.ಕೆ.ರವಿರವರ ಸ್ಮರಣಾರ್ಥವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರು ದಕ್ಷ ಪ್ರಾಮಾಣಿಕ
ಚಿಂತಾಮಣಿಯ ಶಿಕ್ಷಕರಿಗೆ ಬೆಳಗಾವಿಯ ಡಿ.ಕೆ.ರವಿ ಅಭಿಮಾನಿಗಳ ಬಳಗದವತಿಯಿಂದ ರಾಜ್ಯಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಿ.ಕೆ.ರವಿ ಅಭಿಮಾನಿಗಳ ಬಳಗ ಬೆಳಗಾವಿರವರ
ವತಿಯಿಂದ ನಗರದ ಮಾಳಪಲ್ಲಿಯಲ್ಲಿರುವ ಕನ್ನಡ ಸಾಹಿತ್ಯ ಬಳಗದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ
ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿಕ್ಷಕರುಗಳಾದ ಜೈನ್ ಪಬ್ಲಿಕ್ ಶಾಲೆಯ ಶಿಕ್ಷಕ
ಕೆ.ಎನ್.ಅಕ್ರಂಪಾಷ, ಸೂರ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಶಿ.ಮ.ಮಂಜುನಾಥ ಹಾಗೂ ಎಂ.ಕೆ.ಬಿ
ಶಾಲೆಯ ಶಿಕ್ಷಕಿ ಜೀನತ್ ಉನ್ನೀಸಾ ರವರಿಗೆ ೨೦೧೭-೧೮ನೇ ಸಾಲಿನ ‘ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಫಲಕ ಹಾಗೂ ಪದಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ
ಉಪನಿರ್ದೇಶಕರಾದ ಸಿ.ಬಿ.ಹನುಮಂತಪ್ಪನವರು ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿ.ಬಿ.ಹನುಮಂತಪ್ಪನವರು
ಡಿ.ಕೆ.ರವಿ ಅಭಿಮಾನಿಗಳ ಬಳಗದ ವತಿಯಿಂದ ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ಈ ಪ್ರಶಸ್ತಿಗೆ ಚಿಂತಾಮಣಿ
ತಾಲ್ಲೂಕಿನ ಮೂರು ಮಂದಿ ಶಿಕ್ಷಕರುಗಳು ಆಯ್ಕೆಯಾಗಿರುವುದು ತಾಲ್ಲೂಕು ಮತ್ತು ಜಿಲ್ಲೆಗೆ ಸಂದ ಗೌರವ
ಹಾಗೂ ಹೆಮ್ಮೆಯ ವಿಷವಾಗಿದೆ ಎಂದರಲ್ಲದೆ, ಪ್ರತಿವರ್ಷ ಶಿಕ್ಷಕರ ದಿನಾಚರಣೆಯೆಂದು ಸರ್ಕಾರಿ ಶಿಕ್ಷಕರಿಗೆ
ಮಾತ್ರ ಸರ್ಕಾರವು ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೊಡುತ್ತಿದೆ ಆದರೆ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಶಿಕ್ಷಕರಿಗೆ ಇಂತಹ ಪ್ರಶಸ್ತಿ ಭಾಗ್ಯವಿಲ್ಲವೆಂದ ಅವರು ಇಂತಹ ಸಂದರ್ಭದಲ್ಲಿ ಅದನ್ನು ಮನಗಂಡು ಬಳಗವು
ಖಾಸಗಿ ಶಾಲೆಯ ಶಿಕ್ಷಕರುಗಳಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಿರುವ ಬಳಗದ ಕಾರ್ಯವನ್ನು ಶ್ಲಾಘಿಸಿದರು.ಈ
ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಮೂರು ಮಂದಿಯೂ ಅರ್ಹಶಿಕ್ಷಕರೇ ಆಗಿದ್ದಾರೆಂದು ತಿಳಿಸಿದರಲ್ಲದೆ,
ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರಲ್ಲದೆ,
ಜನಸಮುದಾಯವು ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಶಿಕ್ಷಕರ ಸೇವೆಯನ್ನು ಸ್ಮರಿಸುವಂತಾಗಬೇಕೆಂದು
ಹೇಳಿದರಲ್ಲದೆ, ಶಿಕ್ಷಣದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಗುಣಾತ್ಮಕ ಶಿಕ್ಷಣವೆಂಬುದು ಗಗನ
ಕುಸುಮವಾಗಿದೆ ಎಂದರು.ಸತ್ಪ್ರಜೆಗಳನ್ನು ನಿರ್ಮಿಸುವ ಗುರಿಯನ್ನಿಟ್ಟುಕೊಂಡು ಶಿಕ್ಷಕರು ಮುನ್ನಡೆಯಬೇಕೆಂದು
ತಿಳಿಸಿದರಲ್ಲದೆ, ಶಿಕ್ಷಕರನ್ನು ಗೌರವಿಸದಿದ್ದರೆ ಅಭಿವೃದ್ದಿ ಅಸಾಧ್ಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಪರವಾಗಿ
ಮಾತನಾಡಿದ ಜೈನ್ ಶಾಲೆಯ ಶಿಕ್ಷಕ ಕೆ.ಎನ್.ಅಕ್ರಂಪಾಷ ರವರು ತಮ್ಮ ಪ್ರಾಮಾಣಿಕ ಸೇವೆ ಹಾಗೂ ಸಾಧನೆಯನ್ನು
ಪರಿಗಣಿಸಿ ಈ ಬಾರಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ,
ಸಮಾಜದಲ್ಲಿ ಹಲವು ಮಂದಿ ಪ್ರಾಮಾಣಿಕ ಹಾಗೂ ದಕ್ಷ ಶಿಕ್ಷಕರು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ
ಎಲೆಮರೆ ಕಾಯಿಯಂತಿದ್ದು ಅವರನ್ನು ಸಮಾಜ ಮತ್ತು ಸರ್ಕಾರಗಳನ್ನು ಗುರುತಿಸುವಂತಾಗಲೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ವಿಚಾರವಾದಿ
ಚಿಂತಕಿ ಹಸೀನಾ ಬೇಗಂ, ಕಸಾಬ ಅಧ್ಯಕ್ಷ ನಂಜಪ್ಪರೆಡ್ಡಿ ಹಾಗೂ ಸಮಾಜ ಸೇವಕ ರಾಮಚಂದ್ರಾರೆಡ್ಡಿ(ಸ್ವಾಮೀಜಿ)
ರವರುಗಳು ಮಾತನಾಡಿ ಸೇವೆ ನಿಸ್ವಾರ್ಥವಾಗಿರಬೇಕೆಂದರಲ್ಲದೆ, ಯಾವುದೇ ಕೆಲಸವಿರಲಿ ನಾವು ಪ್ರತಿಫಲ ಆಶಿಸಬಾರದೆಂದ
ಅವರು ಆ ನಿಟ್ಟಿನಲ್ಲಿ ಪ್ರತಿಫಲ ಬಯಸದೆ ಕಾರ್ಯನಿರ್ವಹಿಸುತ್ತಿರುವ ಚಿಂತಾಮಣಿಯ ಪ್ರಾಮಾಣಿಕ ಶಿಕ್ಷಕರುಗಳಿಗೆ
ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಶಸ್ತಿ ಸ್ವೀಕರಿಸಿರುವ ಶಿಕ್ಷಕರುಗಳಿಗೆ
ಆ ಪ್ರಶಸ್ತಿಗೆ ಚ್ಯುತಿ ಬಾರದ ಹಾಗೆ ನಡೆದುಕೊಂಡು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರ
ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿಸಿ ಮತ್ತಷ್ಟು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ಜಿ.ವಿ.ರಾಮಕೃಷ್ಣ,
ಲೋಕೇಶ್, ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು, ಗಂಗಾಧರ್, ಜೈನ್ ಶಾಲೆಯ ಜವಹಾರ್ ಬಾಷ, ಸುನಿಲ್
ಮುಂತಾದವರು ಉಪಸ್ಥಿತರಿದ್ದರು.
ಶನಿವಾರ, ಅಕ್ಟೋಬರ್ 7, 2017
ಉದಯೋನ್ಮುಖ ಕವಿಗಳ ಆಶಾಕಿರಣ ಕವಿವಾಣಿ ಪತ್ರಿಕೆ : ನಂಜಪ್ಪರೆಡ್ಡಿ
ಚಿಂತಾಮಣಿ : ಸಾಹಿತ್ಯ
ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಉದಯೋನ್ಮುಖ ಬರಹಗಾರರಿಗೆ ಕನ್ನಡ ಕವಿವಾಣಿ ಪತ್ರಿಕೆಯು ಆಶಾಕಿರಣವಾಗಿದೆ
ಎಂಬುದಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ಅಧ್ಯಕ್ಷ ನಂಜಪ್ಪರೆಡ್ಡಿರವರು ತಿಳಿಸಿದರು.
ನಗರದ ಹೊರವಲಯದ ಬೂರಗಮಾಕಲಹಳ್ಳಿಯ
ಶಿಕ್ಷಕ ಬಿ.ಎಸ್.ಸುಬ್ರಮಣ್ಯರವರ ನಿವಾಸದಲ್ಲಿ ಆಯೋಜಿಸಲಾಗಿದ್ದ
ಕನ್ನಡ ಕವಿವಾಣಿ ಮಾಸಪತ್ರಿಕೆಯ ‘ದೀಪಾವಳಿ ವಿಶೇಷಾಂಕ’ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರ್ಥಿಕ ಬಲವಿಲ್ಲದೆ
ಪತ್ರಿಕೆಗಳ ಮುನ್ನಡೆಯು ಅಸಾಧ್ಯವೆಂದರಲ್ಲದೆ ಪತ್ರಿಕೆಯೊಂದನ್ನು ಹೊರತರುವುದು ಸುಲಭದ ಕೆಲಸವಲ್ಲ ಅದರ
ಹಿಂದೆ ಸಾಕಷ್ಟು ಪರಿಶ್ರಮ ಇರುವುದು ಎಂದ ಅವರು ಪತ್ರಿಕೆಗಳು ಯಾವುದೇ ಆಮಿಷಗಳಿಗೆ ಬಲಿಯಾಗದೆ ಸಮಾಜದ
ಒಳಿತಿಗಾಗಿ ಶ್ರಮಿಸಬೇಕೆಂದರು.
ಚಿಂತಾಮಣಿಯ ಯುವಕ
ಅಕ್ರಂಪಾಷ ಕನ್ನಡ ಮಾಸಪತ್ರಿಕೆಯೊಂದನ್ನು ಹೊರತರುವ ಮೂಲಕ ಉದಯೋನ್ಮುಖರಿಗೂ ಸೂಕ್ತ ಅವಕಾಶಗಳನ್ನು ಕಲ್ಪಿಸುವುದರ
ಜೊತೆಗೆ ಉಚಿತವಾಗಿ ಪತ್ರಿಕೆಯನ್ನು ವಿತರಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.ಈ ಪತ್ರಿಕೆಯಲ್ಲಿ ರಾಜ್ಯಮಟ್ಟದ ಇತರೆ ದೊಡ್ಡಪತ್ರಿಕೆ ಹಾಗೂ ವಿಶೇಷಾಂಕಗಳಲ್ಲಿರುವಂತೆ
ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿದೆ ಎಂದರಲ್ಲದೆ, ಕವಿವಾಣಿ ಮುಂದಿನ ದಿನಗಳಲ್ಲಿ ಚಿರಸ್ಥಾಯಿಯಾಗಿ
ನಿಲ್ಲುವ ಅವಕಾಶಗಳು ಬಹಳವಾಗಿವೆ ಎಂದರು.ಸಮಾಜವನ್ನು ತಿದ್ದುವುದಕ್ಕಾಗಿ ಸಾಹಿತ್ಯವಿರುವುದು, ಜೀವನದ
ಪ್ರತಿಭಿಂಬವೇ ಸಾಹಿತ್ಯ ಎಂದು ಅಭಿಪ್ರಾಯಪಟ್ಟ ಅವರು ಪತ್ರಿಕೆಯು ಮೌಲ್ಯಾಧಾರಿತ ಬರಹಗಳನ್ನು ಪ್ರಕಟಿಸುವತ್ತ
ಗಮನಹರಿಸಬೇಕು ಎಂದ ಅವರು ಈ ಪತ್ರಿಕೆಯ ಮುನ್ನಡೆಗೆ ಎಲ್ಲ ಕನ್ನಡಿಗರು ತುಂಬು ಹೃದಯದಿಂದ ಸಹಕರಿಸಬೇಕೆಂದು
ಕೋರಿದರು.
ವಿಶೇಷಾಂಕವನ್ನು
ಬಿಡುಗಡೆ ಮಾಡಿ ಮಾತನಾಡಿ ರೇಷ್ಮೇ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿಜ್ಞಾನಿಗಳಾದ ಪ್ರೊ||ವಿಜಯೇಂದ್ರ
ರವರು ಕವಿವಾಣಿ ಪತ್ರಿಕೆಯು ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು
ಹೇಳಿದರಲ್ಲದೆ, ಸ್ಥಳೀಯ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರ ಸಾಹಿತ್ಯ ಕೃಷಿಗೆ ಸಹಕರಿಸುತ್ತಿರುವುದು
ಅಭಿನಂದನಾರ್ಹವಾಗಿದೆ ಎಂದರು.ಎಲೆಮರೆಕಾಯಿಯಂತಿದ್ದ ಅನೇಕ ಮಂದಿಯನ್ನು ಕವಿವಾಣಿಯು ನಾಡಿಗೆ ಪರಿಚಯಿಸಿದೆ.ಮುಂದಿನ
ದಿನಗಳಲ್ಲಿ ಈ ಪತ್ರಿಕೆಯಲ್ಲಿ ಉತ್ತಮ ಲೇಖನ- ಬರಹಗಳು ಮೂಡಿಬಂದರೆ ಪತ್ರಿಕೆಯ ಘನತೆ ಇನ್ನಷ್ಟು ಹೆಚ್ಚಾಗುವುದೆಂದಲ್ಲದೆ.ಪತ್ರಿಕೆಗೆ
ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಪಾದಕರಾ ಕೆ.ಎನ್.ಅಕ್ರಂಪಾಷ
ಮಾತನಾಡಿ ಸಾಹಿತ್ಯ ಕುಟುಂಬದಲ್ಲಿ ಸಾಹಿತ್ಯದ ಕುಡಿಯಾಗಿ ಚಿಗುರೊಡೆದಿರುವ ಕವಿವಾಣಿ ಪತ್ರಿಕೆಯು ಮುನ್ನಡೆಯಲು
ಸಹಕರಿಸುವತ್ತಿರುವ ಸಾಹಿತ್ಯಾಸಕ್ತರಿಗೂ, ಕನ್ನಡಾಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸಿದರು.ಎಲ್ಲ ಬುದ್ಧಿಜೀವಿಗಳ
ಸಲಹೆ ಸೂಚನೆಗಳನ್ನು ಸ್ವೀಕರಿಸಿ ಪತ್ರಿಕೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಹೊರತರಲು ಪ್ರಾಮಾಣಿಕ
ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ಸಣ್ಣ ಕನ್ನಡ ಪತ್ರಿಕೆಯು ಹೊರರಾಜ್ಯಗಳಲ್ಲೂ ಸಹ ಕನ್ನಡದ ಕಂಪನ್ನು
ಬೀರುತ್ತಿದ್ದು ಇದಕ್ಕೆ ಕನ್ನಡಿಗರ ಹೃದಯ ವೈಶಾಲ್ಯವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜನಪದ ಗಾಯಕರಾದ ಸೀಕಲ್ ನರಸಿಂಹಪ್ಪ, ಕಾಗತಿ ಮಂಜುನಾಥ, ಚುಟುಕು
ಕವಿ ಶಿ.ಮ.ಮಂಜುನಾಥ, ಕವಿಶಿಕ್ಷಕರಾದ ರಾಮಕೃಷ್ಣ,, ಎಸ್.ಎಫ್.ಎಸ್.ಸುರೇಶ್, ಜೈನ್ ಶಾಲೆಯ ಸಂಗೀತ ಶಿಕ್ಷಕ
ರಾಜೇಶ್, ಜೈನ್ ಮಂಜುನಾಥ, ಶಿಕ್ಷಕ ಬಿ.ಎಸ್.ಸುಬ್ರಮಣ್ಯ, ರಾಮಚಂದ್ರಾರೆಡ್ಡಿ (ಸ್ವಾಮೀಜಿ) ಹಾಗೂ ಹಿತೈಷಿಗಳು
ಉಪಸ್ಥಿತರಿದ್ದರು.
ಭಾನುವಾರ, ಅಕ್ಟೋಬರ್ 1, 2017
ರಾಜ್ಯ ಗೌರವ ಸಲಹೆಗಾರರಾಗಿ ಶಬಾನಾ ಇ ಅಣ್ಣಿಗೇರಿ ನೇಮಕ
ಸಾಹಿತ್ಯಾಸಕ್ತರ ಕೈಗನ್ನಡಿಯಾಗಿ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಕನ್ನಡ ಕವಿವಾಣಿ ಪತ್ರಿಕೆಯ ರಾಜ್ಯ ಗೌರವ ಸಲಹೆಗಾರರನ್ನಾಗಿ ಬೆಳಗಾವಿ ಜಿಲ್ಲೆಯ ಸಂಪಗಾವ್ ನ ಶಬಾನಾ ಇ ಅಣ್ಣಿಗೇರಿರವರನ್ನು ನೇಮಕ ಮಾಡಲಾಗಿದೆಯೆಂದು ಪ್ರಧಾನ ಸಂಪಾದಕರಾದ ಕೆ.ಎನ್.ಅಕ್ರಂಪಾಷರವರು ತಿಳಿಸಿದ್ದಾರೆ. ಶಿಕ್ಷಕಿಯಾಗಿರುವ ಶಬಾನಾ ಇ ಅಣ್ಣಿಗೇರಿಯವರು ರಾಜ್ಯಪ್ರಶಸ್ತಿ ಪುರಸ್ಕೃತ ಲೇಖಕಿಯಾಗಿದ್ದು, ಅವರ ಸಾಹಿತ್ಯ, ಕನ್ನಡ ಹಾಗೂ ಸಮಾಜ ಸೇವೆಗಳನ್ನು ಗಮನಿಸಿ ಪತ್ರಿಕೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಸಂಪಾದಕರು, ಪತ್ರಿಕೆಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವಂತೆ ನೀಡಿರುವ ನೇಮಕಾತಿ ಪತ್ರದಲ್ಲಿ ವಿವರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)










































