ಚಿಂತಾಮಣಿ: ದಕ್ಷ ಐ.ಎ.ಎಸ್ ಅಧಿಕಾರಿ
ದಿವಂಗತ ಡಿ.ಕೆ.ರವಿರವರ ಸ್ಮರಣಾರ್ಥವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರು ದಕ್ಷ ಪ್ರಾಮಾಣಿಕ
ಚಿಂತಾಮಣಿಯ ಶಿಕ್ಷಕರಿಗೆ ಬೆಳಗಾವಿಯ ಡಿ.ಕೆ.ರವಿ ಅಭಿಮಾನಿಗಳ ಬಳಗದವತಿಯಿಂದ ರಾಜ್ಯಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಿ.ಕೆ.ರವಿ ಅಭಿಮಾನಿಗಳ ಬಳಗ ಬೆಳಗಾವಿರವರ
ವತಿಯಿಂದ ನಗರದ ಮಾಳಪಲ್ಲಿಯಲ್ಲಿರುವ ಕನ್ನಡ ಸಾಹಿತ್ಯ ಬಳಗದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ
ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿಕ್ಷಕರುಗಳಾದ ಜೈನ್ ಪಬ್ಲಿಕ್ ಶಾಲೆಯ ಶಿಕ್ಷಕ
ಕೆ.ಎನ್.ಅಕ್ರಂಪಾಷ, ಸೂರ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಶಿ.ಮ.ಮಂಜುನಾಥ ಹಾಗೂ ಎಂ.ಕೆ.ಬಿ
ಶಾಲೆಯ ಶಿಕ್ಷಕಿ ಜೀನತ್ ಉನ್ನೀಸಾ ರವರಿಗೆ ೨೦೧೭-೧೮ನೇ ಸಾಲಿನ ‘ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಫಲಕ ಹಾಗೂ ಪದಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ
ಉಪನಿರ್ದೇಶಕರಾದ ಸಿ.ಬಿ.ಹನುಮಂತಪ್ಪನವರು ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿ.ಬಿ.ಹನುಮಂತಪ್ಪನವರು
ಡಿ.ಕೆ.ರವಿ ಅಭಿಮಾನಿಗಳ ಬಳಗದ ವತಿಯಿಂದ ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ಈ ಪ್ರಶಸ್ತಿಗೆ ಚಿಂತಾಮಣಿ
ತಾಲ್ಲೂಕಿನ ಮೂರು ಮಂದಿ ಶಿಕ್ಷಕರುಗಳು ಆಯ್ಕೆಯಾಗಿರುವುದು ತಾಲ್ಲೂಕು ಮತ್ತು ಜಿಲ್ಲೆಗೆ ಸಂದ ಗೌರವ
ಹಾಗೂ ಹೆಮ್ಮೆಯ ವಿಷವಾಗಿದೆ ಎಂದರಲ್ಲದೆ, ಪ್ರತಿವರ್ಷ ಶಿಕ್ಷಕರ ದಿನಾಚರಣೆಯೆಂದು ಸರ್ಕಾರಿ ಶಿಕ್ಷಕರಿಗೆ
ಮಾತ್ರ ಸರ್ಕಾರವು ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೊಡುತ್ತಿದೆ ಆದರೆ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಶಿಕ್ಷಕರಿಗೆ ಇಂತಹ ಪ್ರಶಸ್ತಿ ಭಾಗ್ಯವಿಲ್ಲವೆಂದ ಅವರು ಇಂತಹ ಸಂದರ್ಭದಲ್ಲಿ ಅದನ್ನು ಮನಗಂಡು ಬಳಗವು
ಖಾಸಗಿ ಶಾಲೆಯ ಶಿಕ್ಷಕರುಗಳಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಿರುವ ಬಳಗದ ಕಾರ್ಯವನ್ನು ಶ್ಲಾಘಿಸಿದರು.ಈ
ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಮೂರು ಮಂದಿಯೂ ಅರ್ಹಶಿಕ್ಷಕರೇ ಆಗಿದ್ದಾರೆಂದು ತಿಳಿಸಿದರಲ್ಲದೆ,
ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರಲ್ಲದೆ,
ಜನಸಮುದಾಯವು ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಶಿಕ್ಷಕರ ಸೇವೆಯನ್ನು ಸ್ಮರಿಸುವಂತಾಗಬೇಕೆಂದು
ಹೇಳಿದರಲ್ಲದೆ, ಶಿಕ್ಷಣದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಗುಣಾತ್ಮಕ ಶಿಕ್ಷಣವೆಂಬುದು ಗಗನ
ಕುಸುಮವಾಗಿದೆ ಎಂದರು.ಸತ್ಪ್ರಜೆಗಳನ್ನು ನಿರ್ಮಿಸುವ ಗುರಿಯನ್ನಿಟ್ಟುಕೊಂಡು ಶಿಕ್ಷಕರು ಮುನ್ನಡೆಯಬೇಕೆಂದು
ತಿಳಿಸಿದರಲ್ಲದೆ, ಶಿಕ್ಷಕರನ್ನು ಗೌರವಿಸದಿದ್ದರೆ ಅಭಿವೃದ್ದಿ ಅಸಾಧ್ಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಪರವಾಗಿ
ಮಾತನಾಡಿದ ಜೈನ್ ಶಾಲೆಯ ಶಿಕ್ಷಕ ಕೆ.ಎನ್.ಅಕ್ರಂಪಾಷ ರವರು ತಮ್ಮ ಪ್ರಾಮಾಣಿಕ ಸೇವೆ ಹಾಗೂ ಸಾಧನೆಯನ್ನು
ಪರಿಗಣಿಸಿ ಈ ಬಾರಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ,
ಸಮಾಜದಲ್ಲಿ ಹಲವು ಮಂದಿ ಪ್ರಾಮಾಣಿಕ ಹಾಗೂ ದಕ್ಷ ಶಿಕ್ಷಕರು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ
ಎಲೆಮರೆ ಕಾಯಿಯಂತಿದ್ದು ಅವರನ್ನು ಸಮಾಜ ಮತ್ತು ಸರ್ಕಾರಗಳನ್ನು ಗುರುತಿಸುವಂತಾಗಲೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ವಿಚಾರವಾದಿ
ಚಿಂತಕಿ ಹಸೀನಾ ಬೇಗಂ, ಕಸಾಬ ಅಧ್ಯಕ್ಷ ನಂಜಪ್ಪರೆಡ್ಡಿ ಹಾಗೂ ಸಮಾಜ ಸೇವಕ ರಾಮಚಂದ್ರಾರೆಡ್ಡಿ(ಸ್ವಾಮೀಜಿ)
ರವರುಗಳು ಮಾತನಾಡಿ ಸೇವೆ ನಿಸ್ವಾರ್ಥವಾಗಿರಬೇಕೆಂದರಲ್ಲದೆ, ಯಾವುದೇ ಕೆಲಸವಿರಲಿ ನಾವು ಪ್ರತಿಫಲ ಆಶಿಸಬಾರದೆಂದ
ಅವರು ಆ ನಿಟ್ಟಿನಲ್ಲಿ ಪ್ರತಿಫಲ ಬಯಸದೆ ಕಾರ್ಯನಿರ್ವಹಿಸುತ್ತಿರುವ ಚಿಂತಾಮಣಿಯ ಪ್ರಾಮಾಣಿಕ ಶಿಕ್ಷಕರುಗಳಿಗೆ
ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಶಸ್ತಿ ಸ್ವೀಕರಿಸಿರುವ ಶಿಕ್ಷಕರುಗಳಿಗೆ
ಆ ಪ್ರಶಸ್ತಿಗೆ ಚ್ಯುತಿ ಬಾರದ ಹಾಗೆ ನಡೆದುಕೊಂಡು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರ
ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿಸಿ ಮತ್ತಷ್ಟು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ಜಿ.ವಿ.ರಾಮಕೃಷ್ಣ,
ಲೋಕೇಶ್, ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು, ಗಂಗಾಧರ್, ಜೈನ್ ಶಾಲೆಯ ಜವಹಾರ್ ಬಾಷ, ಸುನಿಲ್
ಮುಂತಾದವರು ಉಪಸ್ಥಿತರಿದ್ದರು.




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ