ಚಿಂತಾಮಣಿ : ಸಾಹಿತ್ಯ
ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಉದಯೋನ್ಮುಖ ಬರಹಗಾರರಿಗೆ ಕನ್ನಡ ಕವಿವಾಣಿ ಪತ್ರಿಕೆಯು ಆಶಾಕಿರಣವಾಗಿದೆ
ಎಂಬುದಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ಅಧ್ಯಕ್ಷ ನಂಜಪ್ಪರೆಡ್ಡಿರವರು ತಿಳಿಸಿದರು.
ನಗರದ ಹೊರವಲಯದ ಬೂರಗಮಾಕಲಹಳ್ಳಿಯ
ಶಿಕ್ಷಕ ಬಿ.ಎಸ್.ಸುಬ್ರಮಣ್ಯರವರ ನಿವಾಸದಲ್ಲಿ ಆಯೋಜಿಸಲಾಗಿದ್ದ
ಕನ್ನಡ ಕವಿವಾಣಿ ಮಾಸಪತ್ರಿಕೆಯ ‘ದೀಪಾವಳಿ ವಿಶೇಷಾಂಕ’ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರ್ಥಿಕ ಬಲವಿಲ್ಲದೆ
ಪತ್ರಿಕೆಗಳ ಮುನ್ನಡೆಯು ಅಸಾಧ್ಯವೆಂದರಲ್ಲದೆ ಪತ್ರಿಕೆಯೊಂದನ್ನು ಹೊರತರುವುದು ಸುಲಭದ ಕೆಲಸವಲ್ಲ ಅದರ
ಹಿಂದೆ ಸಾಕಷ್ಟು ಪರಿಶ್ರಮ ಇರುವುದು ಎಂದ ಅವರು ಪತ್ರಿಕೆಗಳು ಯಾವುದೇ ಆಮಿಷಗಳಿಗೆ ಬಲಿಯಾಗದೆ ಸಮಾಜದ
ಒಳಿತಿಗಾಗಿ ಶ್ರಮಿಸಬೇಕೆಂದರು.
ಚಿಂತಾಮಣಿಯ ಯುವಕ
ಅಕ್ರಂಪಾಷ ಕನ್ನಡ ಮಾಸಪತ್ರಿಕೆಯೊಂದನ್ನು ಹೊರತರುವ ಮೂಲಕ ಉದಯೋನ್ಮುಖರಿಗೂ ಸೂಕ್ತ ಅವಕಾಶಗಳನ್ನು ಕಲ್ಪಿಸುವುದರ
ಜೊತೆಗೆ ಉಚಿತವಾಗಿ ಪತ್ರಿಕೆಯನ್ನು ವಿತರಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.ಈ ಪತ್ರಿಕೆಯಲ್ಲಿ ರಾಜ್ಯಮಟ್ಟದ ಇತರೆ ದೊಡ್ಡಪತ್ರಿಕೆ ಹಾಗೂ ವಿಶೇಷಾಂಕಗಳಲ್ಲಿರುವಂತೆ
ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿದೆ ಎಂದರಲ್ಲದೆ, ಕವಿವಾಣಿ ಮುಂದಿನ ದಿನಗಳಲ್ಲಿ ಚಿರಸ್ಥಾಯಿಯಾಗಿ
ನಿಲ್ಲುವ ಅವಕಾಶಗಳು ಬಹಳವಾಗಿವೆ ಎಂದರು.ಸಮಾಜವನ್ನು ತಿದ್ದುವುದಕ್ಕಾಗಿ ಸಾಹಿತ್ಯವಿರುವುದು, ಜೀವನದ
ಪ್ರತಿಭಿಂಬವೇ ಸಾಹಿತ್ಯ ಎಂದು ಅಭಿಪ್ರಾಯಪಟ್ಟ ಅವರು ಪತ್ರಿಕೆಯು ಮೌಲ್ಯಾಧಾರಿತ ಬರಹಗಳನ್ನು ಪ್ರಕಟಿಸುವತ್ತ
ಗಮನಹರಿಸಬೇಕು ಎಂದ ಅವರು ಈ ಪತ್ರಿಕೆಯ ಮುನ್ನಡೆಗೆ ಎಲ್ಲ ಕನ್ನಡಿಗರು ತುಂಬು ಹೃದಯದಿಂದ ಸಹಕರಿಸಬೇಕೆಂದು
ಕೋರಿದರು.
ವಿಶೇಷಾಂಕವನ್ನು
ಬಿಡುಗಡೆ ಮಾಡಿ ಮಾತನಾಡಿ ರೇಷ್ಮೇ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿಜ್ಞಾನಿಗಳಾದ ಪ್ರೊ||ವಿಜಯೇಂದ್ರ
ರವರು ಕವಿವಾಣಿ ಪತ್ರಿಕೆಯು ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು
ಹೇಳಿದರಲ್ಲದೆ, ಸ್ಥಳೀಯ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರ ಸಾಹಿತ್ಯ ಕೃಷಿಗೆ ಸಹಕರಿಸುತ್ತಿರುವುದು
ಅಭಿನಂದನಾರ್ಹವಾಗಿದೆ ಎಂದರು.ಎಲೆಮರೆಕಾಯಿಯಂತಿದ್ದ ಅನೇಕ ಮಂದಿಯನ್ನು ಕವಿವಾಣಿಯು ನಾಡಿಗೆ ಪರಿಚಯಿಸಿದೆ.ಮುಂದಿನ
ದಿನಗಳಲ್ಲಿ ಈ ಪತ್ರಿಕೆಯಲ್ಲಿ ಉತ್ತಮ ಲೇಖನ- ಬರಹಗಳು ಮೂಡಿಬಂದರೆ ಪತ್ರಿಕೆಯ ಘನತೆ ಇನ್ನಷ್ಟು ಹೆಚ್ಚಾಗುವುದೆಂದಲ್ಲದೆ.ಪತ್ರಿಕೆಗೆ
ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಪಾದಕರಾ ಕೆ.ಎನ್.ಅಕ್ರಂಪಾಷ
ಮಾತನಾಡಿ ಸಾಹಿತ್ಯ ಕುಟುಂಬದಲ್ಲಿ ಸಾಹಿತ್ಯದ ಕುಡಿಯಾಗಿ ಚಿಗುರೊಡೆದಿರುವ ಕವಿವಾಣಿ ಪತ್ರಿಕೆಯು ಮುನ್ನಡೆಯಲು
ಸಹಕರಿಸುವತ್ತಿರುವ ಸಾಹಿತ್ಯಾಸಕ್ತರಿಗೂ, ಕನ್ನಡಾಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸಿದರು.ಎಲ್ಲ ಬುದ್ಧಿಜೀವಿಗಳ
ಸಲಹೆ ಸೂಚನೆಗಳನ್ನು ಸ್ವೀಕರಿಸಿ ಪತ್ರಿಕೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಹೊರತರಲು ಪ್ರಾಮಾಣಿಕ
ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ಸಣ್ಣ ಕನ್ನಡ ಪತ್ರಿಕೆಯು ಹೊರರಾಜ್ಯಗಳಲ್ಲೂ ಸಹ ಕನ್ನಡದ ಕಂಪನ್ನು
ಬೀರುತ್ತಿದ್ದು ಇದಕ್ಕೆ ಕನ್ನಡಿಗರ ಹೃದಯ ವೈಶಾಲ್ಯವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜನಪದ ಗಾಯಕರಾದ ಸೀಕಲ್ ನರಸಿಂಹಪ್ಪ, ಕಾಗತಿ ಮಂಜುನಾಥ, ಚುಟುಕು
ಕವಿ ಶಿ.ಮ.ಮಂಜುನಾಥ, ಕವಿಶಿಕ್ಷಕರಾದ ರಾಮಕೃಷ್ಣ,, ಎಸ್.ಎಫ್.ಎಸ್.ಸುರೇಶ್, ಜೈನ್ ಶಾಲೆಯ ಸಂಗೀತ ಶಿಕ್ಷಕ
ರಾಜೇಶ್, ಜೈನ್ ಮಂಜುನಾಥ, ಶಿಕ್ಷಕ ಬಿ.ಎಸ್.ಸುಬ್ರಮಣ್ಯ, ರಾಮಚಂದ್ರಾರೆಡ್ಡಿ (ಸ್ವಾಮೀಜಿ) ಹಾಗೂ ಹಿತೈಷಿಗಳು
ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ