ಶುಕ್ರವಾರ, ಜನವರಿ 26, 2018

ಗಣರಾಜ್ಯೋತ್ಸವದ ಬಗ್ಗೆ 8 ಆಸಕ್ತಿಕರ ಅಂಶಗಳು


  • ಭಾರತದಲ್ಲಿ ಘೋಷಿಸಲ್ಪಟ್ಟ ಕೇವಲ 3 ರಾಷ್ಟ್ರೀಯ ರಜೆಗಳಲ್ಲಿ ಗಣರಾಜ್ಯೋತ್ಸವವು ಒಂದು. ಇನ್ನಿತರ ಎರಡು  ರಾಷ್ಟ್ರೀಯ ರಜೆಗಳೆಂದರೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿಜಯಂತಿ.
  • ಯಾಕೆ 26ನೇ ಜನವರಿಯನ್ನು ಗಣರಾಜ್ಯೋತ್ಸವಕ್ಕೆ ಪರಿಗಣಿಸಲಾಯಿತು ನಿಮಗೆ ತಿಳಿದಿದೆಯೇ? 1930 ರ ಜನವರಿ 26 ರಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಬ್ರಿಟಿಷರ ವಿರುದ್ದ ಸಂಪೂರ್ಣ ಸ್ವಾತಂತ್ರ್ಯದ ಆಂದೋಲನ ಸಾರಿದ್ದರು. ಇದರ ವಿಶೇಷತೆಯನ್ನು ನೆನಪಿಸಲು ಭಾರತ ಸರ್ಕಾರವು ಜನವರಿ 26 ಅನ್ನು ಗಣರಾಜ್ಯೋತ್ಸವ ದಿನವನ್ನಾಗಿ ಘೋಷಿಸಿತು.
  • ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ಹಾಡಾದ "ಅಬೈಡ್ ವಿಥ್ ಮಿ" ಅನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಅಂಗವಾಗಿ ನುಡಿಸಲಾಗುತ್ತದೆ.
  • ಇಡೀ ಪ್ರಪಂಚದ ಸಂವಿಧಾನಗಳಲ್ಲಿ, ಭಾರತದ ಸಂವಿಧಾನವು ಗಾತ್ರದಲ್ಲಿ ಎಲ್ಲವುಗಳಿಗಿಂತ ದೊಡ್ಡದಾಗಿದೆ. ಇದು 448 ಪರಿಚ್ಚೇಧಗಳನ್ನೊಳಗೊಂಡಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲಾಗಿತ್ತು.
  • ಭಾರತೀಯ ಸಂವಿಧಾನದ ಕೈಬರಹದ ಮೂಲಪ್ರತಿಗಳನ್ನು ಇಂದಿಗೂ ಸಹ ನೋಡಬಹುದು. ಅವುಗಳನ್ನು ಹೀಲಿಯಂ ತುಂಬಿದ ಡಬ್ಬಗಳಲ್ಲಿ ಸಂರಕ್ಷಿಸಿ, ಪಾರ್ಲಿಮೆಂಟ್ ನ ಗ್ರಂಥಾಲಯದಲ್ಲಿ ಇರಿಸಲಾಗಿದೆ.
  • ಡಾ. ಅಂಬೇಡ್ಕರ್ ನೇತೃತ್ವದ ಸಮಿತಿಗೆ ಇಡೀ ಸಂವಿಧಾನವನ್ನು ಪೂರ್ಣಗೊಳಿಸಲು ಬರೋಬ್ಬರಿ ಎರಡು ವರ್ಷ ಮತ್ತು ಹನ್ನೊಂದು ತಿಂಗಳುಗಳು ಹಿಡಿಯಿತು.
  • 1950ರಲ್ಲಿ ನಡೆದ ಭಾರತದ ಮೊಟ್ಟ ಮೊದಲನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಶ್ಯಾದ ಅಧ್ಯಕ್ಷ ಸುಕಾರ್ನೋರವರು ಭಾಗವಹಿಸಿದ್ದರು.
  • "ಬೀಟಿಂಗ್ ರಿಟ್ರೀಟ್" ಎಂಬ ಕಾರ್ಯಕ್ರಮವನ್ನು ಗಣರಾಜ್ಯೋತ್ಸವ ಆಚರಣೆಯ 3ನೇ ಹಾಗೂ ಕೊನೇ ದಿನವಾದ 29ನೇ ಜನವರಿಯಂದು ಸಾಯಂಕಾಲ ನಡೆಸಲಾಗುತ್ತದೆ. ಇದನ್ನು ಭಾರತೀಯ ಸೇನೆಯ 3 ಮುಖ್ಯ ಅಂಗಗಳಾದ ಭೂಸೇನೆ, ಜಲಸೇನೆ ಮತ್ತು ವಾಯಸೇನೆಯ ಪ್ರದರ್ಶನಕಾರರು ಸೇರಿ ನಡೆಸಿಕೊಡುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ