ಚಿಂತಾಮಣಿ: ಬೆಂಗಳೂರಿನ ರಂಗೋತ್ರಿ ಮಕ್ಕಳ ರಂಗಶಾಲೆ ವತಿಯಿಂದ ತಮಕೂರಿನ ಗುಬ್ಬಿಯಲ್ಲಿ ಇದೇ ಜನವರಿ
೨೯-೩೦ ರಂದು ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಯುವಕವಿ ಮಂಜುನಾಥ ಹೆಗಡೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ
ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನದ ಕವಿಗೋಷ್ಟಿಗೆ ಚಿಂತಾಮಣಿ ರಾಜ್ಯಪ್ರಶಸ್ತಿ ಪುರಸ್ಕೃತ ಯುವಕವಿ
ಹಾಗೂ ಜೈನ್ ಪಬ್ಲಿಕ್ ಶಾಲೆಯ ಶಿಕ್ಷಕರಾದ ಕೆ.ಎನ್.ಅಕ್ರಂಪಾಷ ರವರು ಆಯ್ಕೆಯಾಗಿದ್ದಾರೆ.
ಸಮ್ಮೇಳನಕ್ಕೆ ಆಯ್ಕೆಯಾಗಿರುವ ಅಕ್ರಂಪಾಷ
ರವರು ಜನವರಿ ೩೦ ರಂದು ನಡೆಯಲಿರುವ ‘ಕಾವ್ಯ ಸ್ಪಂದನೆ’ ಕವಿಗೋಷ್ಠಿಯಲ್ಲಿ ತಮ್ಮ ಕವನವಾಚಿಸಲಿದ್ದಾರೆ.ಉಭಯ ಜಿಲ್ಲೆಗಳಿಂದ ಅಕ್ರಂ ಒಬ್ಬರೇ ಕವಿಗೋಷ್ಠಿಗೆ
ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಕಿರುಪರಿಚಯ : ಕವಿಗೋಷ್ಠಿಗೆ ಆಯ್ಕೆಯಾಗಿರುವ ಕೆ.ಎನ್.ಅಕ್ರಂಪಾಷ ರವರು ರಾಜ್ಯದ ಚಿರಪರಿಚಿತ ಯುವಸಾಹಿತಿಗಳಲ್ಲೊಬ್ಬರಾಗಿದ್ದು,
ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ವಿಚಾರ ಪೂರ್ಣ ಕಥೆ, ಕವನ, ಲೇಖನಗಳಿಂದ
ರಾಜ್ಯದ ಗಮನ ಸೆಳೆದವರು.ಅಷ್ಟೇ ಅಲ್ಲದೇ ಕಿರಿಯ ವಯಸ್ಸಿನ ಅಮೋಘ ಸಾಧನೆಗೆ ಸಾಹಿತ್ಯ ರತ್ನ , ಯುವಸಾಧಕ
ರತ್ನ, ವಚನಶ್ರೀ, ಕಾವ್ಯಸೌರಭ, ಕನ್ನಡ ಸಿರಿ, ವಿಶ್ವಮಾನವ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು
ತಮ್ಮ ಮುಡಿಗೇರಿಸಿಕೊಂಡವರು, ಶಿಕ್ಷಕರಾಗಿರುವ ಅಕ್ರಂಪಾಷರವರ ಪ್ರಾಮಾಣಿಕ ಶಿಕ್ಷಣ ಸೇವೆಗೆ ರಾಜ್ಯ
ಅತ್ಯುತ್ತಮ ಯುವಶಿಕ್ಷಕ ಪ್ರಶಸ್ತಿಗೂ ಭಾಜನರಾದವರು.ಕಿರಿಯವಯಸ್ಸಿನಲ್ಲೇ ಕನ್ನಡ ಕವಿವಾಣಿ ಎಂಬ ಸಾಹಿತ್ಯ
ಪತ್ರಿಕೆಯನ್ನು ಆರಂಭಿಸಿ ತಮ್ಮ ಸಂಪಾದಕ್ವದಲ್ಲೇ ೫ ವರ್ಷಗಳಿಂದ ಪತ್ರಿಕೆಯನ್ನು ಉಚಿತವಾಗಿ ನೀಡುವ
ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದಿದ್ದಾರಲ್ಲದೆ, ಅನೇಕ ಉದಯೋನ್ಮುಖರನ್ನು ಬೆಳಕಿಗೆ ತಂದಿರುವುದು
ಇವರ ಗಮನಾರ್ಹ ಸಾಧನೆಯಾಗಿದೆ. ಇವರ “ಚಂದ್ರನ ಮಗಳು” ಎಂಬ ಕಥಾ ಸಂಕಲವು ಬಿಡುಗಡೆಗೊಂಡು ಜನಪ್ರಿಯವಾಗಿದೆ.
ಅಭಿನಂದನೆಗಳು
: ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನದ ಕವಿಗೋಷ್ಟಿಗೆ ಆಯ್ಕೆಯಾಗಿರುವ ಕೆ.ಎನ್.ಅಕ್ರಂಪಾಷ
ರವರನ್ನು ಚಿಂತಾಮಣಿಯ ಹಲವು ಕವಿ, ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಅಭಿನಂದಿಸಿವೆ.
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ