ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯವತಿಯಿಂದ ನಗರದ ಶ್ರೀ ವಿದ್ಯಾಗಣಪತಿ ರಂಗಮಂದಿರದಲ್ಲಿ ಆಯೋಜಿಸಿದ್ದ ಯುವಸೌರಭ
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ ಪುರಸ್ಕೃತ ಯುವಕವಿ ಕೆ.ಎನ್.ಅಕ್ರಂಪಾಷ
ರವರು ವಾಚಿಸಿದ ಹೊಸವರ್ಷದ ಕುರಿತ “ವಾಸ್ತವ’ ಎಂಬ ಕವನವು ಎಲ್ಲರ ಗಮನ ಸೆಳೆಯಿತ್ತಲ್ಲದೆ, ನೆರದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕವನದ ಕೆಲಸಾಲುಗಳು ಹೀಗಿದ್ದವು “ ಹೊಸವರ್ಷ ಬಂತು, ಹೊಸತೇನು ತಂತು?, ಎಂದಿನಂತೆ
ಅದೇ ಸೂರ್ಯ , ಮತ್ತೆ ಮೂಡಿಬಂತು” ‘ಜಾತಿ ಮತಗಳ ಹಮ್ಮಿನಿಂದ, ಮಂದಿರ
ಕೆಡವಿ ಮಸೀದಿ ಕಟ್ಟಲು, ಮಸೀದಿ ಕೆಡವಿ ಮಂದಿರ ಕಟ್ಟಲುಹೋಗಿ, ಅದೇಷ್ಟೋ ಅಮಾಯಕರ ಗೋರಿ ಕಟ್ಟಿದೆವು,
ಆಗವರ ಪಾಲಿಗೆ ರಾಮನೂ ಬರಲಿಲ್ಲ..ರಹೀಮನೂ ಬರಲಿಲ್ಲ, ಈ ಅರಿವು ನಮಗಿನ್ನೂ ಯಾಕೆ ಬರಲಿಲ್ಲ?. ಎಂಬ ಸಾಲುಗಳಿಂದ
ಹೀಗೆ ಮುಂದುವರೆದ ಕವನವು ಹೊಸವರ್ಷ ಬಂದರೂ ಹೊಸ ಬದಲಾವಣೆಯನ್ನು ಮಾತ್ರ ಜನ ಕಾಣಲಿಲ್ಲ ಎಂಬ ವಾಸ್ತವ
ಸಂಗತಿಯನ್ನು ಬಿಚ್ಚಿಟ್ಟಿತು.
ಈ ಸಂದರ್ಭದಲ್ಲಿ ಕವನ ವಾಚಿಸಿದ ಯುವಕವಿ ಕೆ.ಎನ್.ಅಕ್ರಂಪಾಷ
ರವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮನ ಅಧ್ಯಕ್ಷೆ ವಾಣಿಕೃಷ್ಣಾರೆಡ್ಡಿ ರವರು ನೆನಪಿನ
ಕಾಣಿಕೆ, ಪ್ರಮಾಣ ಪತ್ರವನ್ನು ನೀಡಿ ಅಭಿನಂದನಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್.ವೆಂಕಟಾಚಲಪತಿ, ಸಹಾಯಕ ಪ್ರಾಧ್ಯಾಪಕ ಡಾ||ಎಂ.ಎನ್.ರಘು, ಚಿಂತಕಿ
ಹಸೀನಾ ಬೇಗಂ, ಕಾಗತಿ ವಿ.ವೆಂಕಟರತ್ನಂ, ಕೋಟಗಲ್ ನಾಗಸುಬ್ರಮಣ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಪ್ರೊ||ಸಿ.ಅಶ್ವತ್ಥಮ್ಮ
ಮುಂತಾದವರು ಉಪಸ್ಥಿತರಿದ್ದರು, ಕವಿಗೋಷ್ಠಿಯಲ್ಲಿ ೨೩ ಜನ ಕವಿಗಳು ಕವನವಾಚಿಸಿದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ