- ಭಾರತದಲ್ಲಿ ಘೋಷಿಸಲ್ಪಟ್ಟ ಕೇವಲ 3 ರಾಷ್ಟ್ರೀಯ ರಜೆಗಳಲ್ಲಿ ಗಣರಾಜ್ಯೋತ್ಸವವು ಒಂದು. ಇನ್ನಿತರ ಎರಡು ರಾಷ್ಟ್ರೀಯ ರಜೆಗಳೆಂದರೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿಜಯಂತಿ.
- ಯಾಕೆ 26ನೇ ಜನವರಿಯನ್ನು ಗಣರಾಜ್ಯೋತ್ಸವಕ್ಕೆ ಪರಿಗಣಿಸಲಾಯಿತು ನಿಮಗೆ ತಿಳಿದಿದೆಯೇ? 1930 ರ ಜನವರಿ 26 ರಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಬ್ರಿಟಿಷರ ವಿರುದ್ದ ಸಂಪೂರ್ಣ ಸ್ವಾತಂತ್ರ್ಯದ ಆಂದೋಲನ ಸಾರಿದ್ದರು. ಇದರ ವಿಶೇಷತೆಯನ್ನು ನೆನಪಿಸಲು ಭಾರತ ಸರ್ಕಾರವು ಜನವರಿ 26 ಅನ್ನು ಗಣರಾಜ್ಯೋತ್ಸವ ದಿನವನ್ನಾಗಿ ಘೋಷಿಸಿತು.
- ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ಹಾಡಾದ "ಅಬೈಡ್ ವಿಥ್ ಮಿ" ಅನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಅಂಗವಾಗಿ ನುಡಿಸಲಾಗುತ್ತದೆ.
- ಇಡೀ ಪ್ರಪಂಚದ ಸಂವಿಧಾನಗಳಲ್ಲಿ, ಭಾರತದ ಸಂವಿಧಾನವು ಗಾತ್ರದಲ್ಲಿ ಎಲ್ಲವುಗಳಿಗಿಂತ ದೊಡ್ಡದಾಗಿದೆ. ಇದು 448 ಪರಿಚ್ಚೇಧಗಳನ್ನೊಳಗೊಂಡಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲಾಗಿತ್ತು.
- ಭಾರತೀಯ ಸಂವಿಧಾನದ ಕೈಬರಹದ ಮೂಲಪ್ರತಿಗಳನ್ನು ಇಂದಿಗೂ ಸಹ ನೋಡಬಹುದು. ಅವುಗಳನ್ನು ಹೀಲಿಯಂ ತುಂಬಿದ ಡಬ್ಬಗಳಲ್ಲಿ ಸಂರಕ್ಷಿಸಿ, ಪಾರ್ಲಿಮೆಂಟ್ ನ ಗ್ರಂಥಾಲಯದಲ್ಲಿ ಇರಿಸಲಾಗಿದೆ.
- ಡಾ. ಅಂಬೇಡ್ಕರ್ ನೇತೃತ್ವದ ಸಮಿತಿಗೆ ಇಡೀ ಸಂವಿಧಾನವನ್ನು ಪೂರ್ಣಗೊಳಿಸಲು ಬರೋಬ್ಬರಿ ಎರಡು ವರ್ಷ ಮತ್ತು ಹನ್ನೊಂದು ತಿಂಗಳುಗಳು ಹಿಡಿಯಿತು.
- 1950ರಲ್ಲಿ ನಡೆದ ಭಾರತದ ಮೊಟ್ಟ ಮೊದಲನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಶ್ಯಾದ ಅಧ್ಯಕ್ಷ ಸುಕಾರ್ನೋರವರು ಭಾಗವಹಿಸಿದ್ದರು.
- "ಬೀಟಿಂಗ್ ರಿಟ್ರೀಟ್" ಎಂಬ ಕಾರ್ಯಕ್ರಮವನ್ನು ಗಣರಾಜ್ಯೋತ್ಸವ ಆಚರಣೆಯ 3ನೇ ಹಾಗೂ ಕೊನೇ ದಿನವಾದ 29ನೇ ಜನವರಿಯಂದು ಸಾಯಂಕಾಲ ನಡೆಸಲಾಗುತ್ತದೆ. ಇದನ್ನು ಭಾರತೀಯ ಸೇನೆಯ 3 ಮುಖ್ಯ ಅಂಗಗಳಾದ ಭೂಸೇನೆ, ಜಲಸೇನೆ ಮತ್ತು ವಾಯಸೇನೆಯ ಪ್ರದರ್ಶನಕಾರರು ಸೇರಿ ನಡೆಸಿಕೊಡುತ್ತಾರೆ.
ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಶುಕ್ರವಾರ, ಜನವರಿ 26, 2018
ಗಣರಾಜ್ಯೋತ್ಸವದ ಬಗ್ಗೆ 8 ಆಸಕ್ತಿಕರ ಅಂಶಗಳು
ಪದ್ಮಶ್ರೀ ಇಬ್ರಾಹೀಂ ಸುತಾರರವರಿಗೆ ಹೃತ್ಪೂರ್ವಕ ಅಭಿನಂದನೆ
೨೦೧೮ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಕಬೀರ ಮಾನ್ಯ ಶ್ರೀ ಇಬ್ರಾಹೀಂ ಸುತಾರರವರಿಗೆ ಕವಿವಾಣಿ ಪತ್ರಿಕಾ ಬಳಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇವೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಇವರ ವೈಯಕ್ತಿಕ ಅಂತರ್ಜಾಲ ತಾಣವಾದ www.ibrahimsutar.com ವೀಕ್ಷಿಸಿ.
ಮತ್ತಷ್ಟು ಸಂಬಂಧಿತ ಮಾಹಿತಿಗಾಗಿ ಇಲ್ಲಿ ಒತ್ತಿ.
ಮತ್ತಷ್ಟು ಸಂಬಂಧಿತ ಮಾಹಿತಿಗಾಗಿ ಇಲ್ಲಿ ಒತ್ತಿ.
ಗುರುವಾರ, ಜನವರಿ 25, 2018
ಶನಿವಾರ, ಜನವರಿ 20, 2018
ಬರಹಗಳಿಗೆ ಆಹ್ವಾನ

ಮಾರ್ಚ್ ೮ ಮಹಿಳಾ ದಿನಾಚರಣೆಯ ಅಂಗವಾಗಿ ಕವಿವಾಣಿ ಪತ್ರಿಕೆಯು ಮಹಿಳಾ ದಿನಾಚರಣೆ ವಿಶೇಷ ಸಂಚಿಕೆಯನ್ನ ಹೊರತರಲು ಉದ್ದೇಶಿಸಿದ್ದು, ಮಹಿಳಾ ಪರವಾದ ಲೇಖನ, ಕವನಗಳನ್ನು, ಸಾಧಕಿ ಮಹಿಳೆಯರ ಪರಿಚಯವನ್ನು, ಸಾಮಾಜಿಕ ಕಳಕಳಿಯುಳ್ಳ ಬರಹಗಳನ್ನು, ಚುಟುಕು, ಕಥೆಗಳನ್ನು, ಫೆಬ್ರುವರಿ ೧೫ರ ಒಳಗಾಗಿ ಪತ್ರಿಕೆ ಇ-ಮೇಲ್ ವಿಳಾಸಕ್ಕೆ ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಿಕೊಡಬೇಕಾಗಿ ಕೋರುತ್ತೇವೆ.
ಇಂತಿ
ಸಂಪಾದಕರು, ಕನ್ನಡ ಕವಿವಾಣಿ ಪತ್ರಿಕೆ
ಇಮೇಲ್ ವಿಳಾಸ - kavi.vani2014@gmail.com ಅಥವಾ kannadaakram@gmail.com
ಅಖಿಲಭಾರತ ಯುವಕವಿ ಸಮ್ಮೇಳನಕ್ಕೆ ಅಕ್ರಂಪಾಷ ಆಯ್ಕೆ
ಯುವಸೌರಭ ಕವಿಗೋಷ್ಠಿಯಲ್ಲಿ ಗಮನಸೆಳೆದ ‘ವಾಸ್ತವ’ ಕವನ
ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯವತಿಯಿಂದ ನಗರದ ಶ್ರೀ ವಿದ್ಯಾಗಣಪತಿ ರಂಗಮಂದಿರದಲ್ಲಿ ಆಯೋಜಿಸಿದ್ದ ಯುವಸೌರಭ
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ ಪುರಸ್ಕೃತ ಯುವಕವಿ ಕೆ.ಎನ್.ಅಕ್ರಂಪಾಷ
ರವರು ವಾಚಿಸಿದ ಹೊಸವರ್ಷದ ಕುರಿತ “ವಾಸ್ತವ’ ಎಂಬ ಕವನವು ಎಲ್ಲರ ಗಮನ ಸೆಳೆಯಿತ್ತಲ್ಲದೆ, ನೆರದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕವನದ ಕೆಲಸಾಲುಗಳು ಹೀಗಿದ್ದವು “ ಹೊಸವರ್ಷ ಬಂತು, ಹೊಸತೇನು ತಂತು?, ಎಂದಿನಂತೆ
ಅದೇ ಸೂರ್ಯ , ಮತ್ತೆ ಮೂಡಿಬಂತು” ‘ಜಾತಿ ಮತಗಳ ಹಮ್ಮಿನಿಂದ, ಮಂದಿರ
ಕೆಡವಿ ಮಸೀದಿ ಕಟ್ಟಲು, ಮಸೀದಿ ಕೆಡವಿ ಮಂದಿರ ಕಟ್ಟಲುಹೋಗಿ, ಅದೇಷ್ಟೋ ಅಮಾಯಕರ ಗೋರಿ ಕಟ್ಟಿದೆವು,
ಆಗವರ ಪಾಲಿಗೆ ರಾಮನೂ ಬರಲಿಲ್ಲ..ರಹೀಮನೂ ಬರಲಿಲ್ಲ, ಈ ಅರಿವು ನಮಗಿನ್ನೂ ಯಾಕೆ ಬರಲಿಲ್ಲ?. ಎಂಬ ಸಾಲುಗಳಿಂದ
ಹೀಗೆ ಮುಂದುವರೆದ ಕವನವು ಹೊಸವರ್ಷ ಬಂದರೂ ಹೊಸ ಬದಲಾವಣೆಯನ್ನು ಮಾತ್ರ ಜನ ಕಾಣಲಿಲ್ಲ ಎಂಬ ವಾಸ್ತವ
ಸಂಗತಿಯನ್ನು ಬಿಚ್ಚಿಟ್ಟಿತು.
ಈ ಸಂದರ್ಭದಲ್ಲಿ ಕವನ ವಾಚಿಸಿದ ಯುವಕವಿ ಕೆ.ಎನ್.ಅಕ್ರಂಪಾಷ
ರವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮನ ಅಧ್ಯಕ್ಷೆ ವಾಣಿಕೃಷ್ಣಾರೆಡ್ಡಿ ರವರು ನೆನಪಿನ
ಕಾಣಿಕೆ, ಪ್ರಮಾಣ ಪತ್ರವನ್ನು ನೀಡಿ ಅಭಿನಂದನಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್.ವೆಂಕಟಾಚಲಪತಿ, ಸಹಾಯಕ ಪ್ರಾಧ್ಯಾಪಕ ಡಾ||ಎಂ.ಎನ್.ರಘು, ಚಿಂತಕಿ
ಹಸೀನಾ ಬೇಗಂ, ಕಾಗತಿ ವಿ.ವೆಂಕಟರತ್ನಂ, ಕೋಟಗಲ್ ನಾಗಸುಬ್ರಮಣ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಪ್ರೊ||ಸಿ.ಅಶ್ವತ್ಥಮ್ಮ
ಮುಂತಾದವರು ಉಪಸ್ಥಿತರಿದ್ದರು, ಕವಿಗೋಷ್ಠಿಯಲ್ಲಿ ೨೩ ಜನ ಕವಿಗಳು ಕವನವಾಚಿಸಿದರು.
ಸೋಮವಾರ, ಜನವರಿ 15, 2018
ಗುರುವಾರ, ಜನವರಿ 4, 2018
ಸೋಮವಾರ, ಜನವರಿ 1, 2018
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




































