ಚಿಂತಾಮಣಿ: ಅಜ್ಜಂಪುರ ಜಿ.ಸೂರಿ
ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹ ಲೋಕ ವಾಟ್ಸಪ್ ಬಳಗದ ವತಿಯಿಂದ ೬೨ನೇ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಡೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಚಿಂತಾಮಣಿಯಿಂದ
ಆಯ್ಕೆಯಾಗಿದ್ದ ವಿಚಾರವಾದಿ ಚಿಂತಕಿ ಹಸೀನಾ ಬೇಗಂ ರವರು ತಮ್ಮ ಸ್ವರಚಿತ ‘ನಾನು ಹಿಂದೂಸ್ತಾನಿ ಮುಸಲ್ಮಾನ’ ಎಂಬ ಕವನವನ್ನು ವಾಚಿಸಿದರು. ಹಸೀನಾ ಬೇಗಂ ವಾಚಿಸಿದ ಕವನವು ಎಲ್ಲರ ಮೆಚ್ಚುಗೆ
ಗಳಿಸಿತು.
ಈ ಸಂದರ್ಭದಲ್ಲಿ ಹಸೀನಾ ಬೇಗಂ ರವರಿಗೆ ಸೂರಿ ಪ್ರತಿಷ್ಠಾನದ
ಅಧ್ಯಕ್ಷ ಸೂರಿ ಶ್ರೀನಿವಾಸ್ ರವರು ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಕನ್ನಡ ಪುಸ್ತಕ
ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಶರತ್ ಕೃಷ್ಣಮೂರ್ತಿರವರು
ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ