ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ
ಬರಹಲೋಕ ವಾಟ್ಸಪ್ ಬಳಗದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ
ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾಗಿದ್ದ ಖ್ಯಾತ ಕನ್ನಡದ ಅನುವಾದಕ ಅಜ್ಜಂಪುರ
ಸೂರಿ ರವರ ಮೊಮ್ಮಗ ಪೃಥ್ವಿ ಸೂರಿರವರನ್ನು ಚಿಂತಾಮಣಿಯ ಕನ್ನಡ ಕವಿವಾಣಿ ಪತ್ರಿಕಾ ಬಳಗದ ವತಿಯಿಂದ
ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ
ಅಧ್ಯಕ್ಷೆ ಡಾ||ವಸುಂಧರಾ ಭೂಪತಿ, ಕವಿವಾಣಿ ಸಂಪಾದಕ ಕೆ.ಎನ್.ಅಕ್ರಂಪಾಷ, ಪತ್ರಿಕಾ ಬಳಗದ ನಂಜಪ್ಪರೆಡ್ಡಿ,
ಶಿ.ಮ.ಮಂಜುನಾಥ, ರಾಮಚಂದ್ರಾರೆಡ್ಡಿ(ಸ್ವಾಮಿಜಿ), ಹಸೀನಾ ಬೇಗಂ, ಗಂಗರಾಜು, ಎ.ವಿ.ಮಂಜುನಾಥ, ಜೀನತ್
ಉನ್ನೀಸಾ ರವರುಗಳು ಉಪಸ್ಥಿತಿರಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ