ರಾಜ್ಯಮಟ್ಟದ ವಾಟ್ಸಾಪ್ ನ್ಯಾನೋ ಕಥಾ ಸ್ಪರ್ಧೆಗೆ ಆಹ್ವಾನ
ಸಹೃದಯ ಕವಿಗಳೇ ಹಾಗೂ ಸಾಹಿತಿಗಳೇ ನಮ್ಮ ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ ವತಿಯಿಂದ ಈ ಹಿಂದೆ ಕವನ ಸ್ಪರ್ಧೆ ಕಥಾ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತ ಬಂದಿದ್ದೇವೆ ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನ್ಯಾನೋ ಕಥೆಗಳನ್ನು ಸಹ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಆಸಕ್ತರು ಕೆಳಗೆ ಸೂಚಿಸಿರುವಂತೆ ನ್ಯಾನೋ ಕಥೆಗಳನ್ನು ರಚಿಸಿ ನಮ್ಮ ವಾಟ್ಸಾಪ್ ಗೆ ಕಳುಹಿಸಲು ಕೋರಲಾಗಿದೆ.
✍️✍️ ಸೂಚನೆಗಳು ✍️✍️
- ಕಥೆ ನೀತಿಪೂರ್ಣವಾಗಿರಬೇಕು.
- ಕಥೆ ಚಿಕ್ಕದಾಗಿ ಚೊಕ್ಕವಾಗಿರಬೇಕು.
- ಕಥೆಗೊಂದು ಶೀರ್ಷಿಕೆ ಇರಬೇಕು
- ಸ್ವರಚಿತ ಕಥೆಯಾಗಿಬೇಕು..
- ಒಬ್ಬರು 1 ನ್ಯಾನೋ ಕಥೆಯನ್ನು ಮಾತ್ರ ಕಳುಹಿಸಬೇಕು .
- ಕಥೆಗಳನ್ನು ಮೇ 02 -2020 ರ ಸಂಜೆ 6:00 ಒಳಗೆ ಸೂಚಿಸಲಾದ ವಾಟ್ಸಪ್ ನಂಬರ್ ಗೆ ಕಳುಹಿಸಬೇಕು.
- ಅವಧಿ ಮೀರಿದ ನಂತರ ಬಂದ ಕಥೆಗಳನ್ನು ಸ್ವೀಕರಿಸುವುದಿಲ್ಲ.
- ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆಯುವವರಿಗೆ ಕನ್ನಡ ಸಿರಿ ಎಂಬ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುವುದು. ಸಮಾಧಾನಕರ ಬಹುಮಾನಗಳನ್ನು ಐದು ಜನರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಪ್ರಮಾಣ ಪತ್ರವನ್ನು ಅವರವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
- ಸ್ಪರ್ಧೆಯಲ್ಲಿ ಭಾಗವಹಿಸುವ ಅವರಿಗೆ ಹಾಗೂ ವಿಜೇತರಾದವರಿಗೆ ಗೌರವಧನ ನಗದು ಬಹುಮಾನ ನೆನಪಿನ ಕಾಣಿಕೆ ನೀಡಲಾಗುವುದಿಲ್ಲ
- ನ್ಯಾನೋ ಕಥೆಗಳ ಮೇಲೆ ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಗೆ ಎಂದು ನಮೂದಿಸಿರಬೇಕು .
- ಕಥೆಗಳ ಜೊತೆಗೆ ತಮ್ಮ ಭಾವಚಿತ್ರ ,ಮೊಬೈಲ್ ಸಂಖ್ಯೆ ,ಇಮೇಲ್ ವಿಳಾಸ ,ಪೂರ್ಣ ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
- ಕಥೆಗಳನ್ನು ಟೈಪ್ ಮಾಡಿ ಕಳುಹಿಸಬೇಕು. ಫೋಟೋ ತೆಗೆದು ಕಳುಹಿಸಿದ ಅಥವಾ ಕೈಬರಹದ ಕಥೆಗಳನ್ನು ಸ್ವೀಕರಿಸಲಾಗುವುದಿಲ್ಲ.
- ಕಥೆಗಳನ್ನು ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 8310502935
- ಕಥೆಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
🌸🌸🌸🌸🌸🌸
✍️✍️✍️✍️✍️✍️✍️✍️
ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ