ಭಾನುವಾರ, ಮೇ 3, 2020

ಭಾವಪೂರ್ಣ ಶ್ರದ್ಧಾಂಜಲಿ - ಡಾ. ಕೆ ಎಸ್ ನಿಸಾರ್ ಅಹಮದ್



ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ನಿತ್ಯೋತ್ಸವ ಕವಿ ಎಂದೆ ಖ್ಯಾತರಾದವರು, ತಮ್ಮ ಬರಹದ ಮೂಲಕ ನಾಡಿನ ಜನರ ಮನೆ-ಮನಗಳನ್ನು ತಲುಪಿದವರು, ಸರಳ ಸಜ್ಜನಿಕೆಗೆ ಹೆಸರಾದವರು ,ಸಾಹಿತ್ಯಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿದ  ಗೌರವಾನ್ವಿತ ನಿತ್ಯೋತ್ಸವ ಕವಿ ನಾಡೋಜ ಪದ್ಮಶ್ರೀ ಡಾ. ಕೆ ಎಸ್ ನಿಸಾರ್ ಅಹಮದ್ ರವರ ಅಗಲಿಕೆ ಯು ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ . ಇವರ ಅಗಲಿಕೆಯಿಂದಾಗಿ ಸಾಹಿತ್ಯ ಲೋಕ ಬಡವಾಗಿದೆ . ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಆ ಭಗವಂತ ಇವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತಾ ಕವಿ ನಿಸಾರ್ ಅಹಮದ್ ರವರಿಗೆ ಕನ್ನಡ ಕವಿವಾಣಿ ಮಾಸಪತ್ರಿಕೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ.

🌸🌸🌸🌸🌸🌸🌸
 ಕೆ ಎನ್ ಅಕ್ರಂಪಾಷ
ಪ್ರಧಾನ ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ