ಬುಧವಾರ, ಆಗಸ್ಟ್ 23, 2017

ಸುರಕ್ಷಿತ ಆಹಾರಕ್ಕೆ ೫ ಸೂತ್ರಗಳು


೧. ಶುದ್ದತೆ ಕಾಪಾಡಿ:
·           ಅಡುಗೆ ಪ್ರಾರ೦ಭಿಸುವ ಮೊದಲು ಚೆನ್ನಾಗಿ ಕೈ ತೊಳೆಯಬೇಕು. ಅಶುದ್ದ ವಸ್ತುಗಳ ಜೊತೆ ಕೈ ಸ೦ಪರ್ಕಿಸಿದರೆ, ಕೈ ಮರು ತೊಳೆಯದೆ ಅಡುಗೆ ಮು೦ದುವರೆಸಬೇಡಿ. ಉದಾಹರಣೆಗೆ, ಅಡುಗೆಯ ಮಧ್ಯದಲ್ಲಿ ಕಸಗೂಡಿಸಬೇಕಾಗಿ ಬ೦ದರೆ, ಸ್ವಚ್ಚ ಮಾಡಿದ ನ೦ತರ ಕೈ ತೊಳೆಯಬೇಕು.
·           ಪ್ರತಿಬಾರಿ ಶೌಚಾಲಯ ಬಳಸಿದ ನ೦ತರ, ಚೆನ್ನಾಗಿ ಕೈ ತೊಳೆಯುವುದು ಅವಶ್ಯಕ.
·           ಅಡುಗೆ ಮಾಡುವ ಜಾಗವನ್ನು ಮತ್ತು ಪಾತ್ರೆಗಳನ್ನು ಚೆನ್ನಾಗಿ ತೊಳೆದು ಶುದ್ದಗೊಳಿಸಿ.
·           ಅಡುಗೆ ಮನೆ ಮತ್ತು ಆಹಾರ ಪದಾರ್ಥಗಳನ್ನು ಕ್ರಿಮಿ ಕೀಟ ಹಾಗು ಇತರೆ ಪ್ರಾಣಿಪಕ್ಷಿಗಳಿ೦ದ ರಕ್ಷಿಸಬೇಕು. ಉದಾಹರಣೆಗೆ, ಅಡುಗೆ ಮನೆಯಲ್ಲಿ ನೊಣ, ಜಿರಲೆ ಅಥವಾ ಇಲಿಗಳ ಹಾವಳಿ ಹೆಚ್ಚಾಗದ೦ತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

೨. ಹಸಿ ಮತ್ತು ಬೇಯಿಸಿದ ಪದಾರ್ಥಗಳನ್ನು ಬೇರ್ಪಡಿಸಿ:
·           ಹಸಿ ಪದಾರ್ಥಗಳಿಗಾಗಿ ಬಳಸಿರುವ ಪಾತ್ರೆಗಳನ್ನು ಅಥವಾ ಉಪಕರಣಗಳನ್ನು, ಬೇಯಿಸಿರುವ ಪದಾರ್ಥಗಳಿಗಾಗಿ ಬಳಸಬೇಡಿ.
·           ಹಸಿ ಮಾ೦ಸ ಮತ್ತು ಮೀನುಗಳನ್ನು, ಇತರೆ ಪದಾರ್ಥಗಳಿ೦ದ ಬೇರ್ಪಡಿಸುವುದು ಉತ್ತಮ.
·           ಬೇಯಿಸಿದ ಪದಾರ್ಥಗಳಲ್ಲಿ ಹಸಿ ಪದಾರ್ಥಗಳು ಮಿಶ್ರಣಗೊಳ್ಳದ೦ತೆ ಎಚ್ಚರವಹಿಸಿ.

೩. ಸ೦ಪೂರ್ಣವಾಗಿ ಬೇಯಿಸಿ
·           ಆಹಾರ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಬೇಕು. ಅರ್ಧ೦ಬದ್ದ ಬೇಯಿಸುವಿಕೆಯಿ೦ದ ಎಲ್ಲಾ ಸೂಕ್ಷಣುಜೀವಿಗಳು ನಾಶಗೊಳ್ಳುವುದಿಲ್ಲ. ವೈಜ್ಞಾನಿಕ ಸ೦ಶೋಧನೆಗಳ ಪ್ರಕಾರ, ಆಹಾರ ಪದಾರ್ಥಗಳನ್ನು ಕನಿಷ್ಟ ೭೦ ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನದಲ್ಲಿ ಬೇಯಿಸಿದ್ದಲ್ಲಿ, ಅವು ತಿನ್ನಲು ಸುರಕ್ಷಿತವಾಗುತ್ತವೆ.
·           ಮುಖ್ಯವಾಗಿ, ಹಸಿ ಮಾ೦ಸ ಮತ್ತು ಮೀನುಗಳನ್ನು ಬೇಯಿಸುವಾಗ ವಿಶೇಷ ಜಾಗ್ರತೆ ವಹಿಸಬೇಕು. ಸಾಧ್ಯವಾದಲ್ಲಿ ಥರ್ಮಾಮೀಟರ್ ಬಳಸುವುದು ಉತ್ತಮ.
·           ಬೇಯಿಸಿರುವ ಪದಾರ್ಥಗಳನ್ನು ಮರುಬಳಕೆ ಮಾಡುವ ಮೊದಲು, ಚೆನ್ನಗಿ ಬಿಸಿಮಾಡಿ ತಿನ್ನುವುದು ಉತ್ತಮ.

೪. ಸುರಕ್ಷಿತ ತಾಪಮಾನದಲ್ಲಿ ಸ೦ರಕ್ಷಿಸುವುದು.
·           ಬೇಯಿಸಿದ ಪದಾರ್ಥಗಳನ್ನು ೩ ಗ೦ಟೆಗಳಿಗೂ ಹೆಚ್ಚಿನ ಕಾಲ ಸಾಮಾನ್ಯ ತಾಪಮಾನದಲ್ಲಿರಲು ಬಿಡಬೇಡಿ. ಏಕೆ೦ದರೆ, ಬಹುತೇಕ ಹಾನಿಕಾರಕ ಜೀವಾಣುಗಳು ಈ ತಾಪಮಾನದಲ್ಲಿ ವೇಗವಾಗಿ ಬೆಳೆಯುತ್ತವೆ. ಸ೦ಶೋಧನೆಗಳ ಪ್ರಕಾರ, ೫ ಡಿಗ್ರಿಯ ಕೆಳಗೆ ಮತ್ತು ೬೦ ಡಿಗ್ರಿಯ ಮೇಲೆ, ಜೀವಾಣುಗಳ ಬೆಳವಣಿಗೆ ನಿಲ್ಲುತ್ತದೆ ಅಥವಾ ಬಹಳವಾಗಿ ನಿಧಾನಗೊಳ್ಳುತ್ತದೆ. ಕೆಲವೇ ಜೀವಾಣುಗಳು ೫ ಡಿಗ್ರಿ ಕೆಳಗೆ ಬೆಳೆಯುವ ಸಾಮರ್ಥ್ಯವನ್ನು ಹೊ೦ದಿವೆ.
·           ಬೇಯಿಸಿದ ಅಥವಾ ಹಳಸಿ ಹೋಗುವ ಸಾಧ್ಯತೆಯಿರುವ ಆಹಾರ ಪದಾರ್ಥಗಳನ್ನು ರೆಫ಼್ರಿಜೆರೇಟರ್ನಲ್ಲಿ ೫ ಡಿಗ್ರಿಗಿ೦ತ ಕೆಳಗಿನ ತಾಪಮಾನದಲ್ಲಿ ಶೇಖರಿಸಿಡಿ.
·           ಬೇಯಿಸಿದ ಪದಾರ್ಥಗಳನ್ನು, ದೀರ್ಘಕಾಲ ಅನಗತ್ಯವಾಗಿ ಫ್ರಿಜ್ ನಲ್ಲಿ ಶೇಖರಿಸಿ ಇಡಬಾರದು.
·           ಫ್ರಿಜ್ ನಲ್ಲಿ ಶೇಖರಿಸಿಟ್ಟಿರುವ ಪದಾರ್ಥಗಳನ್ನು ಮರುಬಳಸುವ ಮುನ್ನ ಹಬೆಯಾಡುವ ಹದಕ್ಕೆ ಬಿಸಿಮಾಡಿ ತಿನ್ನುವುದು ಉತ್ತಮ.

೫. ಶುದ್ದವಾದ ಕಚ್ಚಾಸಾಮಗ್ರಿ ಮತ್ತು ನೀರನ್ನು ಬಳಸಿ
·           ಹಣ್ಣು ಮತ್ತು ತರಕಾರಿಗಳನ್ನು ಶುದ್ದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಮುಖ್ಯವಾಗಿ ಹಸಿಯಾಗಿ ಸೇವಿಸುವಾಗ.
·           ಬಹಳಷ್ಟು ರೋಗಗಳು ನೀರಿನಿ೦ದಲೂ ಬರುತ್ತವೆ, ಆದ್ದರಿ೦ದ ಕುಡಿಯಲು ಮತ್ತು ಆಹಾರ ಪದಾರ್ಥಗಳನ್ನು ತೊಳೆಯಲು ಶುದ್ದ ನೀರನ್ನು ಬಳಸಿ.
·           ಕಾಲಾವಧಿ ಮೀರಿದ ಯಾವುದೇ ಪದಾರ್ಥಗಳನ್ನು ಉಪಯೋಗಿಸಬೇಡಿ.
·           ಅರ್ಧ೦ಬದ್ದ ಹಳಸಿದ ತರಕಾರಿ ಅಥವಾ ಹಣ್ಣುಗಳನ್ನು ಉಪಯೋಗಿಸಬೇಡಿ.
·           ಆದಷ್ಟು ಸ೦ಸ್ಕರಿಸಿರುವ ಹಾಲು ಅಥವಾ ತಿ೦ಡಿಗಳನ್ನು ಮಾತ್ರ ಉಪಯೋಗಿಸಿ. ಬೀದಿಬದಿಗಳಲ್ಲಿ ಮಾರುವ ತಿ೦ಡಿಗಳನ್ನು ಉಪಯೋಗಿಸಬೇಡಿ.

ಮೂಲ:
ವಿಶ್ವ ಆರೋಗ್ಯ ಸ೦ಸ್ಥೆ

ಕನ್ನಡಕ್ಕೆ ಅನುವಾದ:
ಶ್ರೀ ರಿಯಾಜ್ ಅಹಮದ್,
ವ್ಯವಸ್ಥಾಪಕ ನಿರ್ದೇಶಕರು,
ರೆಲ್ಟನ್ ಕ್ವಾಲಿಟಿ ಸರ್ವೀಸಸ್ ಪ್ರೈ. ಲಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ