ಭಾನುವಾರ, ಆಗಸ್ಟ್ 27, 2017

ಅಕ್ರಂಪಾಷಾರಿಗೆ ಜಿಲ್ಲಾಮಟ್ಟದ "ವಚನಶ್ರೀ" ಪ್ರಶಸ್ತಿಯ ಗರಿ



ಕರ್ನಾಟಕ ವಚನ ಸಾಹಿತ್ಯ ಪರಿಷತ್, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಚಿಂತಾಮಣಿಯ ಕವಿವಾಣಿ ಪತ್ರಿಕೆಯ ಸಂಪಾದಕ ಹಾಗೂ ಜೈನ್ ಪಬ್ಲಿಕ್ ಶಾಲೆಯ ಶಿಕ್ಷಕ ಕೆ.ಎನ್.ಅಕ್ರಂಪಾಷ ರವರಿಗೆ ಇತ್ತೀಚೆಗೆ ಚಿಂತಾಮಣಿಯಲ್ಲಿ ನಡೆದ ಕವಸಾಪ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ ವಿರಚಿತ ಕೃತಿಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಚನಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿಯು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿತ್ತು.

         ಈ ಸಂದರ್ಭದಲ್ಲಿ ತಹಸೀಲ್ದಾರ್ ಗಂಗಪ್ಪ, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಣ್ಣ, ಕವಸಾಪ ಜಿಲ್ಲಾಧ್ಯಕ್ಷರಾದ ಸಿ.ಬಿ.ಹನುಮಂತಪ್ಪ, ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ್, ಚಿಂತಕೆ ಹಸೀನಾ ಬೇಗಂ, ಲೇಖಕಿ ಜೀನತ್ ಉನ್ನೀಸಾ, ಕೆ.ಜಿ.ಎಫ಼್ ನ ರಾಧಾ ಡಾ.ಪ್ರಕಾಶ್, ಆಯಿಷಾ ಸುಲ್ತಾನ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕವನ ಸ್ಪರ್ಧೆಯ ಇತರ ವಿಜೇತರರಿಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೋಲಾರದ ಯುವಕವಿ ಶರಣಪ್ಪ ಗಬ್ಬೂರು ಪ್ರಥಮ ಸ್ಥಾನವನ್ನು, ಕೋಲಾರದ ಹಣಬೆ ನಾ ಪಾಪೇಗೌಡ ತೃತೀಯ ಸ್ಥಾನವನ್ನು, ಕೆ.ಜಿ.ಎಫ಼್ ನ ಯುವಕವಿ ಜಾವಿದ್ ಪಾಷ ನಾಲ್ಕನೇ ಸ್ಥಾನ, ಬಾಗೇಪಲ್ಲಿಯ ಎ.ಲೋಕೇಶ್ ಐದನೇ ಸ್ಥಾನ ಹಾಗೂ ಪಣಸಚೌಡನಹಳ್ಳಿಯ ವಿ.ಚಲಪತಿ ಆರನೇ ಸ್ಥಾನವನ್ನು ಪಡೆದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇತರೆ ೧೯ ಮಂದಿ ಕವಿಗಳಿಗೂ ಸಮಾಧಾನಕರ ಬಹುಮಾನವಾಗಿ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ನೀಡಿ ಉತ್ತೇಜಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ