ಮಣಿದ್ವೀಪ ಎಂಬ ರಾಜ್ಯವನ್ನು ನರಸಿಂಹ ಎಂಬ ರಾಜ ಆಳುತ್ತಿದ್ದನು. ಆತನು ರಾಜ್ಯಪಾಲನೆಯ ಮೇಲೆ
ಶ್ರದ್ದೆ ತೋರಿಸುತ್ತರಲಿಲ್ಲ, ಅದನ್ನೆ ನೆಪವಾಗಿಸಿ ಕೊಂಡ ರಾಜ್ಯದಲ್ಲಿ ಅಧಿಕಾರಿಗಳು ಯಥೇಚ್ಚವಾಗಿ
ತಮಗೆ ತೋಚಿದಷ್ಟು ಅವರು ಆಕ್ರಮಣ ಮಾಡಲು
ಆರಂಭಿಸಿದರು. ಇದರಿಂದ ರಾಜ್ಯದಲ್ಲಿ ತೀವ್ರ ಅಶಾಂತಿ ಉಂಟಾಯಿತು.
ಫಣಿ ಎಂಬ ಕಳ್ಳ ಒಂದು ದಿನ ಕಳ್ಳತನಕ್ಕೆ
ಹೊರಟನು. ಅರ್ಧರಾತ್ರಿ ವೇಳೆ ಅವನು ಸೇನಾಧಿಪತಿಯ ಮನೆಗೆ ನುಗಿ ಹಣ, ಒಡವೆ ಕದ್ದುಕೊಂಡು ಹೋದನು. ಈ
ಒಡವೆಗಳನ್ನು ಈಗಲೇ ಮಾರಿದರೆ ಯಾರಾದರು ಹಿಡಿದುಕೊಳ್ಳುತ್ತಾರೆ, ಇನ್ನೂ ಸ್ವಲ್ಪ ದಿನಗಳು ಕಳೆದ
ಮೇಲೆ ಇನ್ನಷ್ಟು ಕಳ್ಳತನಗಳನ್ನು ಮಾಡಿ ಈ ಊರನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಿ
ಬಿಡಬಹುದುದೆಂದುಕೊಂಡನು ಫಣಿ.
ಮರುದಿನ ಒಬ್ಬ ವ್ಯಾಪಾರಿಯ ಮನೆಯಲ್ಲಿ
ಕಳ್ಳತನ ಮಾಡಿದನು ಫಣ, ಆ ಒಡವೆಗಳನ್ನು ಸಹ ತನ್ನ ಮನೆಯಲ್ಲಿ ರಹಸ್ಯವಾಗಿ ಬಚ್ಚಿಟ್ಟನು. ಇನ್ನೊಂದು
ದಿನ ರೈತನ ಮನೆಯಲ್ಲಿ ಕಳ್ಳತನ ಮಾಡಿದನು. ಆ ನಂತರ ಒಬ್ಬ ಕೂಲಿಯವನ ಮನೆಯಲ್ಲಿ ಕಳ್ಳತನ ಮಾಡಿದನು
ಫಣಿ. ಬೆಳಗಾಗುತ್ತಲೆ ಕೂಲಿಯವನು ಹೋಗಿ ರಾಜನಿಗೆ ಫಿರ್ಯಾದು ಮಾಡಿದನು.
“ನಿನ್ನ ಮನೆಯಲ್ಲಿ ಏನೇನು ಕಳುವಾಗಿದೆ?”ಎಂದು ಕೇಳಿದನು ರಾಜ. ಅದಕ್ಕೆ “ನಾಕ್ಕು ಬೆಳ್ಳಿಯ ಚಂಬುಗಳು ಕಳುವಾಗಿದೆ
ಮಹಾರಾಜ!”ಎಂದನು ಆ ಕೂಲಿಯವನು. ರಾಜ
ತನ್ನ ಸೇನಾಧಿಪತಿಗಳನ್ನು ಕಳುಹಿಸಿ ಹುಡುಕಿಸಿದಾಗ ಕಳ್ಳತನ ಮಾಡುತ್ತಿದ್ದ ಫಣಿ ಮನೆಯಲ್ಲಿ ನಾಲ್ಕು
ಬೆಳ್ಳಿಚೆಂಬುಗಳು ಜೊತೆಗೆ ಅಮೂಲ್ಯವಾದ ವಸ್ತುಗಳು ಲಭಿಸಿದವು. ಸೇನಾಧಿಪತಿಗಳು ಹೊಡೆದಾಗ ಆ
ವಸ್ತುಗಳನ್ನು ಎಲ್ಲೆಲ್ಲಿ ಕಳ್ಳತನ ಮಾಡಿದ್ದನೋ ಅವನೆಲ್ಲ ಹೇಳಿ ಬಿಟ್ಟನು ಫಣಿ.
ಆದರೆ ಸೇನಾಧಿಪತಿ, ವ್ಯಾಪಾರಿ, ರೈತ ಅಕ್ರಮ ಸಂಪಾದನೆ ಯಾದರಿಂದಲೇ ಫಿರ್ಯಾದು
ಮಾಡಲಿಲ್ಲವೆಂದು ತಿಳಿದು ರಾಜ ಆಶ್ಚರ್ಯಗೊಂಡನು. ಅಂದಿನಿಂದ ರಾಜ್ಯಪಾಲನೆಯ ಮೇಲೆ ದೃಷ್ಟಿ ಇಟ್ಟ
ರಾಜ ಲಂಚತೆಗೆದುಕೊಳ್ಳುವವರನ್ನು , ಜನರಿಗೆ ಮಾಸ ಮಾಡುವವರನ್ನು ಕಠಿಣವಾಗಿ ಶಿಕ್ಷಿಸಲು
ಆರಂಭಿಸಿದನು. ಅದರಿಂದ ರಾಜ್ಯದಲ್ಲಿ ಶಾಂತಿ ಭದ್ರತೆ ನೆಲೆಸಿತು , ಜನರು ಸುಖ-ಶಾಂತಿಯಿಂದ ಜೀವನ
ಸಾಗಿಸ ತೊಡಗಿದರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ