ಕೃಷ್ಣಾಪುರ ಗ್ರಾಮದಲ್ಲಿ ರಾಮಯ್ಯ ಎಂಬ ವೃದ್ದ ವಾಸಿಸುತ್ತಿದ್ದನು. ಅವನಿಗೆ ಇಬ್ಬರು
ಗಂಡುಮಕ್ಕಳು, ಸೂರ್ಯ & ಚಂದ್ರ. ಒಮ್ಮೆ ರಾಮಯ್ಯನ ಆರೋಗ್ಯ
ಕ್ಷೀಣಿಸಿತು. ತಾನು ಇನ್ನು ಬದುಕುವುದಿಲ್ಲವೆಂದು ಭಾವಿಸಿದ ರಾಮಯ್ಯ ತನ್ನ ಹಿರಿಯ ಮಗ ಸೂರ್ಯನನ್ನು ಹತ್ತಿರ ಕರೆದು ಅದೇನೊ ಹೇಳಿ ಮರಣಹೊಂದಿದನು. ಅಣ್ಣನಿಗೆ ತಂದೆ
ಏನು ಹೇಳಿರಬಹುದು? ಎಂದು ಚಂದ್ರನಿಗೆ ಅನುಮಾನ ಹುಟ್ಟಿತು. ಆ ಅನುಮಾನ ಭೂತವಾಗಿ ಬೆಳೆಯಿತು.
ಒಂದು ದಿನ ಸೂರ್ಯ ತಮ್ಮನಿಗೆ ಒಂದು ಹಳೆಯ ಪೆಟ್ಟಿಗೆಯನ್ನು
ಕೊಟ್ಟು “ಇದೇ ತಂದೆ ನನಗೆ ಕೊಟ್ಟ ಒಡವೆಗಳು”ಎಂದು ಕೊಟ್ಟನು. ಚಂದ್ರ ಆ ಒಡವೆಗಳನ್ನು ಮಾರಿ ಹಣ ತಂದುಕೊಳ್ಳಬೇಕೆಂದು ಯೇಚಿಸಿ ಪಕ್ಕದ
ಊರಿನಲ್ಲಿ ಇದ್ದ ಒಬ್ಬ ವ್ಯಾಪಾರಿಯ ಹತ್ತಿರ ಹೋದನು. ವ್ಯಾಪಾರಿ ಆ ಒಡವೆಗಳನ್ನು ನೋಡಿದ ತಕ್ಷಣ
ಅನುಮಾನಗೊಂಡು ರಹಸ್ಯವಾಗಿ ಒಬ್ಬ ವ್ಯಕ್ತಿಗೆ
ತಿಳಿಸಿದನು. ಅವರು ಬಂದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಚಂದ್ರನ ಅತ್ತಿಗೆಯ ತಂದೆ ಅಂದರೆ ಸೂರ್ಯನ ಮಾವ.
“ತಪ್ಪು ಹುಡುಗನೆ! ಮನೆಯ ಒಡವೆಗಳನ್ನು ಮಾರಬಾರದು” ಎಂದು ಹೇಳಿ ಅವರು
ಚಂದ್ರನನ್ನು ಊರಿಗೆ ಕರೆದುಕೊಂಡು ಹೋದರು. ಈ ವಿಷಯ ತಿಳಿದ ಸೂರ್ಯ “ತಮ್ಮನೆ ! ಆ ಒಡವೆಗಳು ನಿನ್ನ ಅತ್ತಿಗೆಯದು. ಮಾವನವರು ಆ ವ್ಯಾಪಾರಿಯ ಬಳಿ ಮಾಡಿಸಿದ
ಒಡವೆಗಳು. ತಂದೆ ನನಗೆ ಒಡವೆಗಳನ್ನು ಕೊಟ್ಟಿದ್ದಾರೆಂದು ಅನುಮಾನದಿಂದ ನೀನು ನನ್ನ ಜೊತೆ
ಜಗಳವಾಡಿದೆ. ಅದಕ್ಕೆ ನಿನ್ನ ಅತ್ತಿಗೆಯ ಒಡವೆಗಳನ್ನು ನಿನಗೆ ಕೊಟ್ಟು, ತಂದೆ ಕೊಟ್ಟಿದ್ದಾಗಿ
ಹೇಳಿದೆ. ಇಷ್ಟಕ್ಕೂ ಆ ದಿನ ತಂದೆ ನನಗೆ ಹೇಳಿದ್ದು ಏನೆಂದರೆ “ತಮ್ಮನಿಗೆ ಇನ್ನೂ ಅಣ್ಣ ಮತ್ತು ತಂದೆ ಎರಡು
ನೀನೆ, ಅವನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊ”ಎಂದು. ಅದು ನಡೆದ ವಿಷಯ ಎಂದನು. ಚಂದ್ರ ಅಣ್ಣನ ಒಳ್ಳೆಯತನವನ್ನು
ತಿಳಿದು, ಅಣ್ಣನ ಕಾಲಿನ ಮೇಲೆ ಬಿದ್ದು ಕ್ಷಮೆಯಾಚಿಸಿದನು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ